ಮಂಗಳೂರು: ಖಾಸಗಿ ಶಾಲೆಗಳು ಆನ್ಲೈನ್ ಬೋಧನೆಯನ್ನು ನೆಪವಾಗಿ ಇಟ್ಟುಕೊಂಡು ಅಸಹಾಯಕ ಪೋಷಕರಿಂದ ಶುಲ್ಕ ಪಡೆಯುವಂತಿಲ್ಲ ಹಾಗೂ 2019-20 ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ವಸೂಲಾತಿಯನ್ನು ಸರಕಾರದ ಆದೇಶ ಬರುವವರೆಗೆ ಪಡೆಯುವಂತಿಲ್ಲ ಎಂದು ಎ.17 ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಂದು ವೇಳೆ ಪಡೆಯಲು ಮುಂದಾದಲ್ಲಿ ಸರ್ಕಾರದ ಆದೇಶ ಖಂಡಿಕೆ(7) ಮತ್ತು ಸಾಂಕ್ರಾಮಿಕ ರೋಗಗಳ ಅಧಿನಿಯಮ 1897ರ ಸೆಕ್ಷನ್ 3 ರಂತೆ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳುವುದರ ಜೊತೆಗೆ ಶಾಲೆಯ ಅನುಮತಿಯನ್ನೇ ರದ್ದುಗೊಳಿಸುವ ಆದೇಶದ ಸುತ್ತೋಲೆ ಬಿಡುಗಡೆಗೊಳಿಸಿದೆ. ಈಗಾಗಲೇ ಕೊರೊನಾ ಲಾಕ್ಡೌನ್ನಿಂದ ಪೋಷಕರು ಕೆಲಸ, ವಹಿವಾಟುಗಳನ್ನು ಕಳೆದುಕೊಂಡು ಕಂಗೆಟ್ಟು ಹೋಗಿದ್ದಾರೆ. ಈ ನಡುವೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಹೆಸರಿನಲ್ಲಿ ನಡೆಸುತ್ತಿರುವ ವ್ಯವಹಾರವನ್ನು ಮುಂದುವರಿಸಲು ಮುಂದಾಗಿದ್ದಾರೆ. ರಾಜ್ಯಾದ್ಯಂತ ಹಲವು ಶಿಕ್ಷಣ ಸಂಸ್ಥೆಗಳು ಈಗಾಗಲೇ ವಿದ್ಯಾರ್ಥಿಗಳ ಪೋಷಕರನ್ನು ಸಂಪರ್ಕಿಸಿ, ಶಾಲಾ ಯುನಿಫಾರಂ, ಬುಕ್ಸ್ ಅಲ್ಲದೆ ಆನ್ಲೈನ್ ಪಾಠದ ಶುಲ್ಕ ಅನ್ನುವ ನೆಪಗಳನ್ನು ಮುಂದಿಟ್ಟುಕೊಂಡು ಹಣ ಪಡೆಯಲು ಮುಂದಾಗುತ್ತಿದೆ. ಪೋಷಕರೇ ಇಂತಹ ಯಾವುದೇ ಕರೆ ಬಂದರೂ, ಶುಲ್ಕ ಪಾವತಿಸಲು ಒತ್ತಾಯಿಸಿದಲ್ಲಿ ಅಲ್ಲದೆ, ವಿದ್ಯಾರ್ಥಿಗಳಿಗೆ ಸೀಟು ಸಿಗುವುದಿಲ್ಲ ಅನ್ನುವ ಬ್ಲ್ಯಾಕ್ಮೇಲ್ ಕಾರ್ಯಕ್ಕೆ ಮುಂದಾದಲ್ಲಿ ನಿಮ್ಮ ಜನರ ಸೇವಕ ಶಾಸಕರನ್ನು ಸಂಪರ್ಕಿಸಿ. ಅವರಿಂದಲೂ ನ್ಯಾಯ ಸಿಗದ ಪಕ್ಷದಲ್ಲಿ ಜನಾಭಿಪ್ರಾಯದೊಂದಿಗೆ ನಮ್ಮ ಮಾಧ್ಯಮದ ಮೂಲಕ ಜಸ್ಟ್ ಕ್ಲಿಕ್ ಮೂಲಕ ನೇರವಾಗಿ ಒತ್ತಾಯಿಸಿ.